Wednesday, November 25, 2009

ನೆನಪಿನ ದೋಣಿಯಲಿ ನಾನು...

ನೆನಪು ಯಾರಿಗೆ ಬೇಡ ಹೇಳಿ ನೆನಪು ಕಹಿ ಇರಲಿ ಸಿಹಿ ಇರಲಿ ನೆನಪುಗಳಿಲ್ಲದೇ ಇರಲು ಸಾಧ್ಯವಿಲ್ಲ.
ನೆನಪಿನ ಬುತ್ತಿಯ ಗಂಟು ಬಿಚ್ಚಿದ್ದೇನೆ ಸವಿಯನ್ನು ನಿಮಗೂ ಉಣಬಡಿಸುವ ಆಸೆ ಇದೆ
ಬುತ್ತಿ ರುಚಿಯಾಗಿದೆ ತಯಾರಿಸಿದವರು ಬಹಳಷ್ಟು ಜನ ನನ್ನ ಜೊತೆ ದೋಣಿ ಏರಿಲ್ಲ ಅವರ ದಡ ಸ್ವಲ್ಪ ಲಗೂನೆ ಬಂದಿದೆ
ಇಳಿದುಕೊಂಡಿದ್ದಾರೆ....!
ಆದರೂ ಅವರೊಡನೆ ಕಳೆದ ಸುಖ ದುಃಖದ ಕ್ಷಣ ನಿಮ್ಮೊಂದಿಗೆ ಹಂಚಿಕೊಳ್ಳುವವನಿದ್ದೇನೆ.
ಬುತ್ತಿರುಚಿಯಾಗಿದ್ದರೆ ಮನದಣಿಯೆ ಸವಿಯಿರಿ ಕಹಿ ಅನಿಸಿದಾಗೆಲ್ಲ ಉಗಿಯಿರಿ..!
ಬರ್ರಿ ದೋಣಿ ಏರೋಣ....

. ಸುರು ಮಾಡೋದು ಅವಳಿಂದಲೇ ಅದು ನ್ಯಾಯವೂ ಹೌದು ಅವಳಿಲ್ಲದಿದ್ದರೆ ನಾ ಎಲ್ಲಿ ಇರತಿದ್ದೆ..
ಅವ್ವ ಈಗಿಲ್ಲ ೧೩ ವರ್ಷ ಆದವು ಫೋಟೋದಲ್ಲಿ ಕೈದ ಆಗಿ, ನೆನಪು ಬರ್ತದ ಕಣ್ಣೂ ಹನಿಗೂಡ್ತದ
ಏನು ಮಾಡಲಿ... ಅವಳಬಗ್ಗೆ ಹೇಳಲು ಹೊರಟಿರುವೆ ಕಷ್ಟ ಅದ ಆದ್ರೂ ಕವಿತಾದಾಗ ಹಿಡಿದಿಡಲಿಕ್ಕೆ ಪ್ರಯತ್ನ ಮಾಡೇನಿ....

ನನ್ನವ್ವ
------
ಹಾಳೆಗಳ ಮೇಲೆ ಭಾವ ಮೂಡಿದರೆ
ಬರೆದೇನು ಕವಿತೆ..
ಹಿಡಿದಿಡಬಹುದಾದರೆ ಕೆತ್ತನೆಯಲಿ
ಕೆತ್ತೇನು ಅವಳ...
ಅವ್ವ ಅಮೂರ್ತ ರೂಪಿ
ಶಿಲ್ಪಿ ಕವಿಗಳಿಗೆ ನಿಲುಕದ ಕನಸವಳು....!

ಜಗದಲ್ಲಿ ವಿರಳವಾದ ಅಂತಃಕರಣವ
ಜೀವನವಿಡೀ ಉಣ್ಣಿಸಿದಳು
ತಾ ಬೆಂದರೂ ಶಾಖ ಬೇರೆಯವರಿಗೆ
ತಟ್ಟಗೊಡದವಳು...
ನಾನೇ ಹಲವುಬಾರಿ ಕೊಳ್ಳಿ ಇಟ್ಟರೂ
ಸ್ಥಿತಪ್ರಜ್ನೆ ಅವಳು...!

ಅದೇ ಅರಳಿದ ಹೂ ಮೇಲಿನ ಇಬ್ಬನಿ ಹನಿಯವಳು
ರಾತ್ರಿ ಸುರಿಯುವ ತಂಗಾಳಿಯಂತೆ
ದಿಗಿಲಾಗಿ ನಾ ಅತ್ತಾಗ ಕಣ್ಣೀರಂತೆ ಸುಂದರಿಅವಳು
ಹೀಗಿದ್ದಳು ನನ್ನವ್ವ
ಸುಂದರ ಕನಸಂತೆ...
ನೋಡಿದರೆ ಕೈ ಮುಗಿಯುವ ಉತ್ಕಟತೆಯಂತೆ...!

8 comments:

  1. ಉಮೇಶ್ ಅವರೇ,
    ನಾವು ನಿಮ್ಮ 'ನೆನಪಿನ ದೋಣಿ' ಹತ್ತಿಯಾಯ್ತು.
    ತಾಯಿಯ ಮೇಲೆ ಒಂದು ಭಾವಪೂರ್ಣ ಕವನದ ಜೊತೆಗೆ, ನಿಮ್ಮ ನೆನಪಿನ ದೋಣಿಯಲಿ ಅಂಬಿಗರಾಗಿದ್ದಿರಿ.
    ನಿಮ್ಮ ನೆನಪಿನ ದೋಣಿಯ ಸಿಹಿ-ಕಹಿಯನು ಸವಿಯಲು ಬಂದಿದ್ದೇವೆ.
    ನಮ್ಮನ್ನು ಕರೆದೊಯ್ಯಿರಿ...

    ಪ್ರೀತಿಯಿಂದ,
    ಶಿವಪ್ರಕಾಶ್

    ReplyDelete
  2. ನೆನಪಿನ ಬುತ್ತಿಯನ್ನು ಅವ್ವನ ನೆನಪಿನೊಡನೆ ಬಿಚ್ಚುವದು ಉಚಿತವಾಗಿದೆ. ಬುತ್ತಿ ಹಾಗು ಉಪ್ಪಿನಕಾಯಿಗಳನ್ನು ಬಡಿಸುತ್ತಲಿರಿ!

    ReplyDelete
  3. ಶಿವಪ್ರಕಾಶ್ ದೋಣಿ ಹತ್ತಿದ್ದಕ್ಕೆ ಧನ್ಯವಾದಗಳು ನಾ ಅಂಬಿಗ ಎಂದು ಬೀಗುವುದಿಲ್ಲ ನೀವೂ ಕೈ ಜೋಡಿಸಿದರೆ ನೆನಪಿನದೋಣಿಯಲ್ಲಿ
    ಅನಂತಯಾನ ಮಾಡಬಹುದು...!

    ReplyDelete
  4. ಕಾಕಾ ನಿಮ್ಮ ಆಶೀರ್ವಾದ ಹೀಗೆಇರಲಿ. ಚುಟುಕಾಗಿ ನನ್ನ ಕರ್ತವ್ಯ ಜ್ನಾಪಿಸಿರುವಿರಿ ಧನ್ಯವಾದಗಳು...!

    ReplyDelete
  5. ಅದ್ಭುತವಾದ ಕವಿತೆ. ಎರಡಕ್ಷರದ ಅವ್ವ ಎಂಬುದಕ್ಕೆ ಬದಲಿ ಏನ್ನುವುದಿದೆಯೇ??????
    ಅವರಿರುವವರೆಗೂ ಅವರನ್ನು ಸಂತೋಷವಾಗಿರುವಂತೆ ನೋಡಿಕೊಳ್ಳುವುದೇ ನಾವು ಅವರಿಗೆ ಮಾಡಬಹುದಾದ ಅತೀ ದೊಡ್ಡ ಉಪಕಾರ.
    ಭಾಷಾದೃಷ್ಟಿಯಿಂದ ಅತ್ಯಂತ ಸದೃಡ ಕವಿತೆ ಇದಾಗಿದೆ ಎನ್ನಿಸುತ್ತಿದೆ.
    ಅವ್ವ ಅಮೂರ್ತ ರೂಪಿ
    ಶಿಲ್ಪಿ ಕವಿಗಳಿಗೆ ನಿಲುಕದ ಕನಸವಳು....!

    ಆಗಾಗ ಮನಸ್ಸಿನ ಭಿತ್ತಿಯಲ್ಲಿ ಬಂದು ಹೋಗುವ ಭಾವನೆಗಳ ಅಕ್ಷರ ರೂಪದಂತಿವೆ.

    ReplyDelete
  6. ಸತ್ಯ ಸರ್ ಬ್ಲಾಗ್ ಗೆ ಬಂದು ಮೆಚ್ಚಿಗೆಯ ಮಾತಾಡಿ ಪ್ರೋತ್ಸಾಹ ಕೊಟ್ಟಿದೀರಾ ಧನ್ಯವಾದಗಳು
    ನೀವು ಹೇಳೊಹಾಗೆ ಬದುಕಿರುವಾಗಲೇ ಅವರನ್ನು ಚೆನ್ನಾಗಿ ನೋಡಿಕೊಬೇಕು
    ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

    ReplyDelete
  7. "ಅಮೂರ್ತ ರೂಪಿ
    ಶಿಲ್ಪಿ ಕವಿಗಳಿಗೆ ನಿಲುಕದ ಕನಸವಳು....!"
    ತುಂಬಾ ಸುಂದರ ಹಾಗೂ ಮಾತಿಗೆ ನಿಲುಕದ ಸಾಲು! ನಿಜ. ಅಮ್ಮ ಎನ್ನುವ ಎರಡಕ್ಷರದಲ್ಲೇ ಈ ಬ್ರಹ್ಮಾಂಡವೇ ನಿಂತಿದೆ! ತಾಯಿಯ ಮುಂದೆ ಯಾರೂ ಇಲ್ಲ. ತಾಯಿಗೆ ತಾಯಿಯೇ ಸಮಾನ. ಇಂತಹ ಮಾತೃತ್ವಕ್ಕೆ ನಾನೂ ಹಿಂದೆ ಒಂದು ಕವನ ರೂಪ ಕೊಟ್ಟಿದ್ದೆ. ಲಿಂಕ್ ಇಲ್ಲಿದೆ. ಬಿಡುವಾದಾಗ ಓದಿ.
    http://manasa-hegde.blogspot.com/2008/10/blog-post_16.html

    ಉತ್ತಮ ಪ್ರಯತ್ನ. ನಿಮ್ಮ ನೆನಪಿನ ಬುತ್ತಿ ಅಕ್ಷಯವಾಗಿರಲಿ.

    ReplyDelete
  8. ವಂದನೆಗಳು ತೇಜಸ್ವಿ ಮೇಡಂ ನಿಮ್ಮ ಅಭಿಪ್ರಾಯಕ್ಕೆ ಹಾಗೂ ಕರೆ ಮನ್ನಿಸಿ ಬಂದಿದ್ದಕ್ಕೆ .ಹಾಗೆಯೇನಿಮ್ಮ ಕವಿತಾನೂ ಓದ್ದೆ
    ಚೆನ್ನಾಗಿದೆ. ಆಗಾಗ ಬರ್ರಿ ದೋಣಿ ಏರ್ರಿ

    ReplyDelete